An Experiment ಪ್ರಯೋಗ
Manage episode 400329669 series 3203382
ವಿಜ್ಞಾನ ಸಂವಹನದಲ್ಲಿ ಪದ್ಯಗಳನ್ನು ಬಳಸಬಹುದೇ ಎನ್ನುವ ಬಗ್ಗೆ ಯೋಚಿಸುವಾಗ, ಇತ್ತೀಚಿಗೆ ಪ್ರಕಟವಾದೊಂದು ಶೋಧ ಪ್ರಬಂಧ ಸಿಕ್ಕಿತು. ಅದನ್ನು ಪದ್ಯ ರೂಪದಲ್ಲಿ ಬರೆದು ಸ್ನೇಹಿತರಿಗೆ ಹಾಡಿ ಕಳಿಸಬಹುದೇ ಎಂದು ಕೇಳಿದ್ದೆ. ಜಾಣಸುದ್ದಿಯಲ್ಲಿ ಬಳಸುವ ಯೋಚನೆ. ನನ್ನ ಹಾಗೆಯೇ ಹಲವರು ಹಾಡಲು ಬರುವುದಿಲ್ಲ ಎಂದರು. ಕೊನೆಗೆ ವಿನಯ ವಿಠ್ಠಲ್ ತಮ್ಮ ಪುಟ್ಟ ಗೆಳತಿ ಪ್ರಜ್ಞಾಳ ಬಳಿ ಹಾಡಿಸಿ ಕಳಿಸಿದ್ದರು. ಅದು ಎಷ್ಟೊಂದು ಅದ್ಭುತ ಎಂದು ಬೆರಗಾಗುವಷ್ಟರಲ್ಲಿ, ಶ್ರೀ ನಾಗರಾಜ್ ಶ್ರೀಮತಿ ರಮಾಮಣಿಯವರು ಹಾಡಿದ ಸುಶ್ರಾವ್ಯವನ್ನು ಕಳಿಸಿದರು. ಅದರ ಬೆರಗನ್ನು ಸವಿಯುವಷ್ಟರಲ್ಲಿ ಜ್ಞಾನಧ್ವನಿ ರೇಡಿಯೋನ ಪಾಂಡುರಂಗ ವಿಠ್ಠಲ್ ಶ್ರೀ ಶ್ರೀವತ್ಸ ಹಾಡಿದ ಹಾಡನ್ನು ಕಳಿಸಿದರು.
ಜಾಣಸುದ್ದಿಯಲ್ಲಿ ಮೂರನ್ನೂ ಬಳಸುವ ಆಲೋಚನೆ ಇತ್ತು. ಆದರೆ ಅದು ಕೇಳುಗರಿಗೆ ಕಷ್ಟದ ಕೆಲಸ ಎನ್ನಿಸಿ, ಮೂರನ್ನೂ ಇಲ್ಲಿ ಬಳಸಿದ್ದೇವೆ. ಇದು ಒಂದು ಪ್ರಯೋಗ.
ಒಂದೇ ಪದ್ಯ, ಸಂವಹನಗೊಳ್ಳುವ ರೀತಿ ಹೇಗೆ? ಪದ್ಯದ ಹೂರಣವೋ, ಧಾಟೋ, ರಾಗ-ಲಯ ತಾಳವೋ? ಸಂವಹನಕ್ಕೂ ಮನರಂಜನೆಗೂ, ಭಾವಸ್ಫುರಣೆಗೂ ವ್ಯತ್ಯಾಸವೇನು? ಇದನ್ನು ಈ ಮೂರು ಪದ್ಯಗಳನ್ನು ಕೇಳಿಯೇ ತಿಳಿಯಬೇಕು.
ಮೂರೂ ಹಾಡುಗಳೂ ಅದ್ಭುತ. ಆದರೆ ಎಲ್ಲವೂ ಎಲ್ಲರಿಗೂ ಹಿತವೆನ್ನಿಸುವುದಿಲ್ಲ ಎನ್ನುವುದೂ ಸತ್ಯ. ನಿಮಗೆ ಯಾವುದು ಚೆನ್ನಾಗಿ ಕೇಳಿಸಿತು ಎಂಬುದನ್ನು ನಮಗೆ ಬರೆದು ತಿಳಿಸಬಹುದು. ಕರೆ ಮಾಡಿಯೂ ತಿಳಿಸಬಹುದು. ಅಥವಾ ಇಲ್ಲಿ ಆಯ್ಕೆಗಳನ್ನು ಒತ್ತಿಯೂ ತಿಳಿಸಬಹುದು.
727 епізодів