Player FM - Internet Radio Done Right
Checked 1y ago
Додано three роки тому
Вміст надано ಪದ್ಯಪ್ರಿಯ. Весь вміст подкастів, включаючи епізоди, графіку та описи подкастів, завантажується та надається безпосередньо компанією ಪದ್ಯಪ್ರಿಯ або його партнером по платформі подкастів. Якщо ви вважаєте, що хтось використовує ваш захищений авторським правом твір без вашого дозволу, ви можете виконати процедуру, описану тут https://uk.player.fm/legal.
Player FM - додаток Podcast
Переходьте в офлайн за допомогою програми Player FM !
Переходьте в офлайн за допомогою програми Player FM !
Подкасти, які варто послухати
РЕКЛАМА
Matt Deseno is the founder of multiple award winning marketing businesses ranging from a attraction marketing to AI appointment setting to customer user experience. When he’s not working on the businesses he teaches marketing at Pepperdine University and he also teaches other marketing agency owners how they created a software company to triple the profitability for the agency. Our Sponsors: * Check out Kinsta: https://kinsta.com * Check out Mint Mobile: https://mintmobile.com/tmf * Check out Moorings: https://moorings.com * Check out Trust & Will: https://trustandwill.com/TRAVIS * Check out Warby Parker: https://warbyparker.com/travis Advertising Inquiries: https://redcircle.com/brands Privacy & Opt-Out: https://redcircle.com/privacy…
Padya Priya - Kannada Poetry Recital
Відзначити всі (не)відтворені ...
Manage series 3252595
Вміст надано ಪದ್ಯಪ್ರಿಯ. Весь вміст подкастів, включаючи епізоди, графіку та описи подкастів, завантажується та надається безпосередньо компанією ಪದ್ಯಪ್ರಿಯ або його партнером по платформі подкастів. Якщо ви вважаєте, що хтось використовує ваш захищений авторським правом твір без вашого дозволу, ви можете виконати процедуру, описану тут https://uk.player.fm/legal.
ಪದ್ಯಪ್ರಿಯ, a Kannada podcast. A poem for everyday. Why recite a poem? ಭಾವಗಳ ಏರುಪೇರಿಗೆ, ಪದ್ಯಗಳು ಮುಲಾಮು!
…
continue reading
33 епізодів
Відзначити всі (не)відтворені ...
Manage series 3252595
Вміст надано ಪದ್ಯಪ್ರಿಯ. Весь вміст подкастів, включаючи епізоди, графіку та описи подкастів, завантажується та надається безпосередньо компанією ಪದ್ಯಪ್ರಿಯ або його партнером по платформі подкастів. Якщо ви вважаєте, що хтось використовує ваш захищений авторським правом твір без вашого дозволу, ви можете виконати процедуру, описану тут https://uk.player.fm/legal.
ಪದ್ಯಪ್ರಿಯ, a Kannada podcast. A poem for everyday. Why recite a poem? ಭಾವಗಳ ಏರುಪೇರಿಗೆ, ಪದ್ಯಗಳು ಮುಲಾಮು!
…
continue reading
33 епізодів
Усі епізоди
×ಇರುಳಿರಳಳಿದು ದಿನದಿನ ಬೆಳಗೆ ಸುತ್ತಮುತ್ತಲೂ ಮೇಲಕೆ ಕೆಳಗೆ ಗಾವುದ ಗಾವುದ ಗಾವುದ ಮುಂದಕೆ ಎವೆ ತೆರೆದಿಕ್ಕುವ ಹೊತ್ತಿನ ಒಳಗೆ ಹಕ್ಕಿ ಹಾರುತಿದೆ ನೋಡಿದಿರಾ? - ದ.ರಾ.ಬೇಂದ್ರೆ ಕವನ ಸಂಕಲನ: ಗರಿ (೧೯೩೨) https://archive.org/details/dli.osmania.4412/page/n186/mode/1up https://sallaap.blogspot.com/2009/06/blog-post_24.html?m=1 https://www.youtube.com/watch?v=3ryNlk1gup0 https://www.youtube.com/watch?v=CLhB53mj5Wc…
ನಿಮ್ಮೊಡನಿದ್ದೂ ನಿಮ್ಮಂತಾಗದೆ ಜಗ್ಗಿದ ಕಡೆ ಬಾಗದೆ ನಾನು ನಾನೇ ಆಗಿ. ಈ ನೆಲದಲ್ಲೆ ಬೇರೊತ್ತಿದ್ದರೂ ಬೀಗಿ ಪರಕೀಯನಾಗಿ ತಲೆಯೆತ್ತುವುದಿದೆ ನೋಡಿ ಅದು ಬಲುಕಷ್ಟದ ಕೆಲಸ. ವೃತ್ತದಲ್ಲಿ ಉನ್ಮತ್ತರಾದ ನಿಮ್ಮ ಕುಡಿತ ಕುಣಿತ ಕೂಟಗಳು ಕೆಣಕಿ ಎಸೆದಿದ್ದರೂ ಪಂಚೇಂದ್ರಿಯಕ್ಕೆ ಲಗಾಮು ಜಡಿದು ಜಾರದೆ ನಿಮ್ಮತ್ತ ಸಂಯಮವನ್ನೇ ಪೋಷಿಸಿ ಸಾಕುತ್ತ ರೇಖೆಯಲ್ಲೇ ದೊಂಬರಾಟ ನಡೆಸುವುದಿದೆ ನೋಡಿ ಅದು ಬಲು ಕಷ್ಟದ ಕೆಲಸ. ಒಳಗೊಳಗೆ ಬೇರುಕೊಯ್ದು ಲೋಕದೆದುರಲ್ಲಿ ನೀರು ಹೊಯ್ದು ನನ್ನ ಸಲಹುವ ನಿಮ್ಮ ಕಪಟ ಗೊತ್ತಿದ್ದರೂ ಗೊತ್ತಿಲ್ಲದಂತೆ ನಟಿಸಿ ಚಕಾರವೆತ್ತದೆ ನಿಮ್ಮೊಡನೆ ಕಾಫಿಹೀರಿ ಪೇಪರೋದಿ ಹರಟಿ ಬಾಳ ತಳ್ಳುವುದಿದೆ ನೋಡಿ ಅದು ಬಲು ಕಷ್ಟದ ಕೆಲಸ. ನಿಮ್ಮ ಮಾತುಕತೆಗಳಲ್ಲಿ ಹುದುಗಿದ ಬೆಕ್ಕು ಸಂಶಯದ ಪಂಜವೆತ್ತಿ ನನ್ನ ನಂಬಿಕೆ ನೀಯತ್ತು ಹಕ್ಕು ಕೊನೆಗೆ ಸಾಚಾತನವನ್ನು ಪರಚಿ, ಒತ್ತಿ ನೋವಿಗೆ ಕಣ್ಣು ತುಂಬಿದ್ದರೂ, ಚೆಲ್ಲಿದ ರಕ್ತದಲ್ಲಿ ರಾಷ್ಟ್ರೀಯತೆಯ ಧಾತುಗಳ ನನ್ನದುರಿನಲ್ಲೇ ತನಿಖೆಮಾಡುವ ಕ್ಷಣವನ್ನು ಹುಸಿನಗುತ್ತ ಎದುರಿಸುವುದಿದೆಯಲ್ಲ ಅದು ಬಲು ಕಷ್ಟದ ಕೆಲಸ. -ಕೆ ಎಸ್ ನಿಸಾರ್ ಅಹಮದ್. ಕವನ ಸಂಕಲನ: ಸಂಜೆ ಐದರ ಮಳೆ. https://sites.google.com/site/kavanasangraha/Home/nisaar-ahamad/samje-aidara-male https://ruthumana.com/2020/05/04/poetry-reading-k-s-nisar-ahamed/ https://www.youtube.com/watch?v=XfOZy918lCk…
ಮಾತು ಬರುವುದು ಎಂದು ಮಾತಾಡುವುದು ಬೇಡ; ಒಂದು ಮಾತಿಗೆ ಎರಡು ಅರ್ಥವುಂಟು. ಎದುರಿಗಿರುವವ ಕೂಡ ಮಾತ ಬಲ್ಲವ ಗೆಳೆಯ; ಬರಿದೆ ಆಡುವ ಮಾತಿಗರ್ಥವಿಲ್ಲ. ಕಡಲ ತಟಿಯಲಿ ತರುಣ ಬಲೆಯ ಬೀಸಿದ್ದಾನೆ; ಮೀನು ಬೇಳುವ ತನಕ ಕಾಯ ಬೇಕು. ಮೀನ ಹೊರೆಯನು ಹೊತು ಮನೆಗೆ ಬಂದಿದ್ದಾನೆ; ಹುಡುಕುತ್ತಲಿಹನವನು ಮುತ್ತಿಗಾಗಿ. ಮಾತು ಮುತ್ತೆನ್ನುವುದು ಬಲ್ಲವರ ಉಕ್ತಿ; ಬಿಡು. ಮೀನಿನಿಂದಲು ನಮಗೆ ಲಾಭವುಂಟು. ಮುತ್ತ ಹುಡುಕಲು ಹೋಗಿ ಮೀನತಂದಿದ್ದಾನೆ. ಅವನ ದುಡಿಮೆಗೆ ಕೂಡ ಅರ್ಥವುಂಟು. ಮನೆಗೆ ಬಂದಾಗವನ ಮಡದಿ ಮೆಲ್ಲನೆ ನಕ್ಕು ಮುತ್ತಕೊಟ್ಟಳು ಅವನ ಹಸಿದ ತುಟಿಗೆ. ಹೃದಯವನು ಕಲಕಿತ್ತು ಅವಳ ಮೌನದ ಮುತ್ತು. ಮುತ್ತು ಸಿಕ್ಕಿತು ಎಂದು ನಕ್ಕವನು. - ಕೆ ಎಸ್ ನರಸಿಂಹಸ್ವಾಮಿ ಕವನ ಸಂಕಲನ: ನವಿಲದನಿ https://sites.google.com/site/kavanasangraha/Home/ksn/naviladani…
ರಾಮನ್ ಸತ್ತ ಸುದ್ದಿ ಓದಿದ ಬೆಳಿಗ್ಗೆ ಶಿವಮೊಗ್ಗೆಗೆ ದರಿದ್ರ ಥಂಡಿ; ಅಸ್ತಿತ್ವದ ಅಸ್ಪಷ್ಟ ಜಿಜ್ಞಾಸೆ, ಗುರುತಿಸಲಾಗದ ಕಸಿವಿಸಿ, ಮುಜುಗರ ತಾಳದೆ ವಾಕಿಂಗ್ ಹೊರಟೆ; ಬೀದಿ- ಗದೇ ಮಾಮೂಲು ಭಂಗಿ; ಯಾರೂ ದುಃಖಿಸುತ್ತಿಲ್ಲವೆನ್ನಿಸಿ ದುಃಖವಾಯಿತು. ಮೈಲಿಗೆ ಪರಿಚಿತ ಸಿಕ್ಕಿದ್ದು ನವುಲೆ ಗ್ರಾಮದ ಹನುಮ; ಯಾರದೋ ಗದ್ದೆಯಲ್ಲಿ ಗೇಯುವ, ಮೋಟು ಬೀಡಿಯ ಕಿವಿಗೆ ಸಿಕ್ಕಿಸಿಕೊಳ್ಳುವ, ತೊಡೆಯ ಪರಪರ ಕೆರೆದುಕೊಳ್ಳುವ, ಹಳ್ಳಿಯೇ ಹನುಮಿಸಿದಂತೆ ನನಗೆ ಭಾಸವಾಗುವ ವಿಚಿತ್ರ- ಅಭ್ಯಾಸರೂಪಿತ ನಿರ್ದಿಷ್ಟ ಅಳತೆಯ ನಿರ್ವಿವಿಧ ಕೂಗಿಂದ ಹಕ್ಕಿಗಳ ಅಟ್ಟುತಿದ್ದ; ಪಾತಿ ಸರಿಗೊಳಿಸುತಿದ್ದ; ಅಪ್ರಚಲಿತ ಹಳ್ಳಿಪದದ ಅಶಾಸ್ತ್ರೀಯ ಮಟ್ಟನ್ನು ಕುರುಕುತಿದ್ದ. ಕಂಡೊಡನೆ, ’ಹ್ಯಾಂಗಿದೀರಿ’ ಅಂದ; ಈಚೀಚೆಗೆ ಅಪರೂಪವಲ್ಲ ಅಂದ, ಯಾಕೋ ಬಡವಾಗಿದ್ದೀರಿ ಅಂದ, ಮಳೆ ಬೇಕಾಗಿಲ್ಲ ಅಂದ, ಫಸಲನ್ನು ಅಂದಾಜಿಸಿದ, ನೆರೆಯವರೊಡನೆ ದಿನವಹಿ ಕಾದಾಟ ಸಾಕಾಗಿದೆ ಮಾರಾಯರೇ ಅಂದ-ಕೊರೆಯುತ್ತಲೇ ಇದ್ದ-ಹೂಂಗುಟ್ಟಿದೆ- ಅವನ ಮಾತಿಗೆ ಮಂಜಿನೊಳಗಿನ ಸೂರ್ಯ ನನ್ನ ಪ್ರಜ್ಞೆ. ’ರಾಮನ್ ಸತ್ತರೋ ಹನುಮ’ ಅನ್ನಬೇಕು, ಆಗ ತಡೆದು ಸುಮ್ಮನಾದೆ. ರಾಮನ್ ಅರ್ಥೈಸಿಕೊಳ್ಳಬಹುದೆ ಇವನ ಅಶಿಕ್ಷಿತ ಅರಿವಿಗೆ? - ಕೆ. ಎಸ್. ನಿಸಾರ್ ಅಹಮದ್ ಸಂಕಲನ : ನಾನೆಂಬ ಪರಕೀಯ (1972) https://www.sallapa.com/2013/11/blog-post_21.html https://imgur.com/a/ymp0xQI https://ruthumana.com/2020/05/04/poetry-reading-k-s-nisar-ahamed/ https://www.youtube.com/watch?v=QGNPwtk4be4 https://www.google.com/books/edition/KANNADA_NANNA_BARAHA_NANNA_AAYKE/BXiLAwAAQBAJ…
ಎಲ್ಲಿ ಮನಕಳುಕಿರದೋ ಎಲ್ಲಿ ತಲೆ ಬಾಗಿರದೋ ಎಲ್ಲಿ ತಿಳಿವಿಗೆ ತೊಡಕು ತೋರದಿಹುದಲ್ಲಿ ಎಲ್ಲಿ ಮನೆಯೊಕ್ಕಟ್ಟು ಸಂಸಾರ ನೆಲೆಗಟ್ಟು ಧೂಳೊಡೆಯದಿಹುದೋ ತಾನಾನಾಡಿನಲ್ಲಿ ಎಲ್ಲಿ ಸತ್ಯದಗಾಧ ನೆಲೆಯಿಂದ ಸವಿವಾತು ಸಲ್ಲಲಿತ ನಡೆಯಿಂದ ಮುಂಬರಿವುದಲ್ಲಿ ಎಲ್ಲಿ ದಣಿವಿರದ ಸಾಧನೆಯು ಸಫಲತೆಗೆಡೆಗೆ ತೋಳ ನೀಡಿಹುದೋ ತಾನಾನಾಡಿನಲ್ಲಿ ಎಲ್ಲಿ ಸುವಿಚಾರ ನಿರ್ಮಲ ಜಲದೊಸರು ಹರಿದು ಕಾಳರೂಢಿಯ ಮರಳೊಳಿಂಗಿ ಕೆಡದಲ್ಲಿ ಎಲ್ಲಿ ನೀನೆಮ್ಮ ಚಿಂತನವನುದ್ಯಮವ ಸುವಿ- -ಶಾಲತೆಯ ಪೂರ್ಣತೆಗೆ ಮುಂಬರಿಸುವಲ್ಲಿ ಅಲ್ಲಿಯಾ ಬಂಧನ ರಹಿತ ಸುಖದ ಸ್ವರ್ಗದಲಿ ಪಾಲಿಸೈ ಪಿತ ನಮ್ಮ ನಾಡೆಚ್ಚರಿರಲಿ ! - ಕನ್ನಡಾನುವಾದ: ಎಂ.ಎನ್ ಕಾಮತ್ ಎಲ್ಲಿ ಮನವು ನಿರ್ಭಯದಿ ತಲೆಯನೆತ್ತಿ ನಿಲುವುದೋ ಎಲ್ಲಿ ಜ್ಞಾನ ಸುಧಾಪಾನ ಎಲ್ಲರಿಗೂ ಸಿಗುವುದೋ ಎಲ್ಲಿ ಮನೆಯು ಅಡ್ಡಗೋಡೆ ಇಲ್ಲದೆ ವಿಶಾಲವೋ ಎಲ್ಲಿ ಮಾತು ಸತ್ಯದಾಳದಿಂದ ಹೊಮ್ಮಿ ಬರುವುದೋ ಎಲ್ಲಿ ಸತತ ಕರ್ಮ ಪೂರ್ಣಸಿದ್ಧಿ ಪಡೆದು ಮೆರೆವುದೋ ಎಲ್ಲಿ ತಿಳಿವು ಕಟ್ಟಳೆಯ ಮಳಲ ತೊರೆದು ಹರಿವುದೋ ಎಲ್ಲಿ ನೀನು ನಮಗೆ ಧೈರ್ಯ ಎಲ್ಲಿ ನೀನು ನಮಗೆ ಸ್ಥೈರ್ಯ ವರವಿಕಾಸಗೊಳಿಸಿ ಸದಾ ಅಭ್ಯುದಯವ ಕೋರುವೆಯೋ ಆ ಸ್ವತಂತ್ರ ಸ್ವರ್ಗಕೆ ನಮ್ಮ ನಾಡು ಏಳಲೇಳಲೇಳಲೇಳಲೇಳಲೇಳಲಿ - ಕನ್ನಡಾನುವಾದ: ಪ್ರೊ. ವೇಣುಗೋಪಾಲ್ https://bit.ly/2IKeV1l https://www.youtube.com/watch?v=zvYszBKo_D4 https://www.youtube.com/watch?v=nsSoY2qIz44 https://rbalu.com/a-new-beginning/ https://parashuramakalappanagoji.blogspot.com/2019/05/blog-post_7.html https://soundcloud.com/maithreyi-karnoor/pallavi-recites-my-kannada-translation-of-tagores-where-the-mind-is-without-fear…
ಈ ಮುರುಕು ಗುಡಿಸಲಲಿ ಕಿರಿಹಣತೆ ಬೆಳಗುತಿದೆ ಧ್ಯಾನಸ್ಥಯೋಗಿಯೊಲು ಸ್ತಿಮಿತವಾಗಿ ! ಬಡವರಾತ್ಮದ ಹಣತೆ ಇಂತೆ ಬೆಳಗುವುದಲ್ತೆ ಅಜ್ಞಾತವಾಸದಲಿ ದೀನವಾಗಿ. ಅಲ್ಲಿ ಸೌಧಗಳಲ್ಲಿ ಬೀದಿ ಸಾಲುಗಳಲ್ಲಿ ಮಿಂಚುಸೊಡರುಗಳೆನಿತೊ ಶೋಭಿಸಿರೆ ಕೋಟಿ. ಧ್ಯಾನಗಾಂಭೀರ್ಯದಲಿ ಮತ್ತೆ ಸರಳತೆಯಲ್ಲಿ ಯಾವುದೀ ಬಡಗುಡಿಲ ಸೊಡರುರಿಗೆ ಸಾಟಿ ? ಯಾವ ಚಂದ್ರಾದಿತ್ಯ ತಾರೆಗಳಿಗಿದು ಹೀನ, ಇಲ್ಲಿ ಬೆಳಗುತ್ತಿರುವ ಹಣತೆಗಿಹ ಸ್ಥಾನ ? ಸೂರ್ಯನೋ ಹಿರಿಸೊಡರು ಭುವನ ಭವನಕ್ಕೆ ಹಣತೆಯೋ ಕಿರಿಸೊಡರು ಮಣ್ಣು ಗುಡಿಸಲ್ಗೆ. ಯಾವ ಚಿತ್ಶಕ್ತಿಯದು ಸೂರ್ಯನಲಿ ಬೆಳಕಾಗಿ ತಾರೆಯಲಿ ಹೊಳಪಾಗಿ ಬೆಂಕಿಯಲಿ ಬಿಸಿಯಾಗಿ ಪ್ರವಹಿಸಿಹುದೋ, ಆ ದಿವ್ಯಶಕ್ತಿಯೇ ಈ ಮಣ್ಣ ಹಣತೆಯಲಿ ಹರಿಯುತಿರೆ, ಕಿರಿಹಣತೆ ಕಿರಿದಾದರೇನು ? ಬೆಳಕ ಬೀರುವ ಶಕ್ತಿ ಹಿರಿದಲ್ಲವೇನು ? - ಜಿ.ಎಸ್.ಎಸ್. ಶಿವರುದ್ರಪ್ಪ ಕವನ ಸಂಕಲನ: ಸಾಮಗಾನ https://parashuramakalappanagoji.blogspot.com/2018/11/blog-post.html…
ಹೂವು ಬಳ್ಳಿಗೆ ದೀಪ ; ಹಸಿರು ಬಯಲಿಗೆ ದೀಪ ; ಹುಲಿಯ ಕಣ್ಣಿನ ದೀಪ ಕಾಡಿನಲ್ಲಿ ; ಮುತ್ತು ಕಡಲಿಗೆ ದೀಪ, ಹಕ್ಕಿ ಗಾಳಿಗೆ ದೀಪ, ಗ್ರಹತಾರೆಗಳ ದೀಪ ಬಾನಿನಲ್ಲಿ. ಬಲ್ಮೆ ತೋಳಿಗೆ ದೀಪ ; ದುಡಿಮೆ ಬೆವರಿನ ದೀಪ ; ಸಹನೆ ಅನುಭವ - ದೀಪ ಬದುಕಿನಲ್ಲಿ ; ಮುನಿಸು ಒಲವಿಗೆ ದೀಪ ; ಉಣಿಸು ಒಡಲಿಗೆ ದೀಪ ; ಕರುಣೆ ನಂದಾದೀಪ ಲೋಕದಲ್ಲಿ. ತೋರಣದ ತಳಿರಲ್ಲಿ, ಹೊಸಿಲ ಹಣತೆಗಳಲ್ಲಿ, ಬಾಣಬಿರುಸುಗಳಲ್ಲಿ ನಲಿವು ಮೂಡಿ, ಕತ್ತಲೆಯ ಪುಟಗಳಲಿ ಬೆಳಕಿನಕ್ಷರಗಳಲಿ, ದೀಪಗಳ ಸಂದೇಶ ಥಳಥಳಿಸಲಿ ! ಬೆಳಕಿನಸ್ತಿತ್ವವನೆ ಅಣಕಿಸುವ ಕತ್ತಲೆಗೆ ತಕ್ಕ ಉತ್ತರವಲ್ಲಿ ಕೇಳಿಬರಲಿ ! ದೀಪಾವಳಿಯ ಜ್ಯೋತಿ ಅಭಯ ಹಸ್ತವನೆತ್ತಿ ಎಲ್ಲರಿಗೆ ಎಲ್ಲಕ್ಕೆ ಶುಭಕೋರಲಿ ! ಕವನ ಸಂಕಲನ: ನವ ಪಲ್ಲವ ಕವಿ: ಡಾ.ಕೆ.ಎಸ್.ನರಸಿಂಹಸ್ವಾಮಿ. https://sites.google.com/site/kavanasangraha/Home/ksn/nava-pallava…
ಹಣತೆ ಹಚ್ಚುತ್ತೇನೆ ನಾನೂ, ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ; ಲೆಕ್ಕವೇ ಇರದ ದೀಪಾವಳಿಯ ಹಡಗುಗಳೆ ಇದರಲ್ಲಿ ಮುಳುಗಿ ಕರಗಿರುವಾಗ ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ, ಹಣತೆ ಹಚ್ಚುತ್ತೇನೆ ನಾನೂ; ಈ ಕತ್ತಲಿನಿಂದ ಬೆಳಕಿನ ಕಡೆಗೆ ನಡೆದೇನೆಂಬ ಆಸೆಯಿಂದಲ್ಲ. ಕತ್ತಲಿನಿಂದ ಕತ್ತಲೆಗೇ ತಡಕಾಡಿಕೊಂಡು ಬಂದಿವೆ ಹೆಜ್ಜೆ ಶತಮಾನದಿಂದಲೂ. ನಡು ನಡುವೆ ಒಂದಷ್ಟು ಬೆಳಕು ಬೇಕೆಂದು ಆಗಾಗ ಕಡ್ಡಿ ಗೀಚಿದ್ದೇವೆ, ದೀಪ ಮುಡಿಸಿದ್ದೇವೆ, ವೇದ, ಶಾಸ್ತ್ರ, ಪುರಾಣ, ಇತಿಹಾಸ, ಕಾವ್ಯ, ವಿಜ್ಞಾನಗಳ ಮತಾಪು-ಪಟಾಕಿ-ಸುರುಸುರುಬತ್ತಿ-ಹೂಬಾಣ ಸುಟ್ಟಿದ್ದೇವೆ. "ತಮಸೋ ಮಾ ಜ್ಯೋತಿರ್ಗಮಯಾ" ಎನ್ನುತ್ತ ಬರೀ ಬೂದಿಯನ್ನೇ ಕೊನೆಗೆ ಕಂಡಿದ್ದೇವೆ. ನನಗೂ ಗೊತ್ತು, ಈ ಕತ್ತಲೆಗೆ ಕೊನೆಯಿರದ ಬಾಯಾರಿಕೆ ಎಷ್ಟೊಂದು ಬೆಳಕನ್ನು ಇದು ಉಟ್ಟರೂ, ತೊಟ್ಟರೂ ತಿಂದರೂ, ಕುಡಿದರೂ, ಇದಕ್ಕೆ ಇನ್ನೂ ಬೇಕು ಇನ್ನೂ ಬೇಕು ಎನ್ನುವ ಬಯಕೆ. ಆದರೂ ಹಣತೆ ಹಚ್ಚುತ್ತೇನೆ ನಾನೂ, ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ, ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು ನೋಡಬಹುದೆಂಬ ಒಂದೇ ಒಂದು ಆಸೆಯಿಂದ; ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ ನಾನು ಯಾರೋ. - ಜಿ.ಎಸ್.ಎಸ್. ಶಿವರುದ್ರಪ್ಪ ಕವನ ಸಂಕಲನ: ಗೋಡೆ (1972) https://parashuramakalappanagoji.blogspot.com/2018/11/blog-post.html…
ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಟಾಟಾ ಬಿರ್ಲಾ ಜೋಬಿಗೆ ಬಂತು ಜನಗಳ ತಿನ್ನುವ ಬಾಯಿಗೆ ಬಂತು ಕೋಟ್ಯಾಧೀಶನ ಕೋಣೆಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಬಡವನ ಮನೆಗೆ ಬರಲಿಲ್ಲ ಬೆಳಕಿನ ಕಿರಣ ತರಲಿಲ್ಲ ಗೋಳಿನ ಕಡಲನು ಬತ್ತಿಸಲಿಲ್ಲ ಸಮತೆಯ ಹೂವನು ಅರಳಿಸಲಿಲ್ಲ ಹಣವಂತರು ಕೈಸನ್ನೆ ಮಾಡಿದರೆ ಕತ್ತಲೆಯಲ್ಲಿ ಬೆತ್ತಲೆಯಾಯಿತು ಯಾರೂ ಕಾಣದ ಸ್ವಾತಂತ್ರ್ಯ ನಲವತ್ತೇಳರ ಸ್ವಾತಂತ್ರ್ಯ - ಸಿದ್ದಲಿಂಗಯ್ಯ ಕವನ ಸಂಕಲನ: ಕಪ್ಪು ಕಾಡಿನ ಹಾಡು https://imgur.com/a/bLmx8EJ…
ಎಲೆ ಪೂವೆ ಆಲಿಸುವೆ| ನಾ ನಿನ್ನ ಗೀತೆಯನು|| ಎಲೆ ಪೂವೆ ಸೋಲಿಸುವೆ| ನಾ ನಿನ್ನ ಪ್ರೀತಿಯನು|| ಮಜ್ಜನವ ಮಂಜಿನೊಳು| ನೀ ಮಾಡಿ ನಲಿವಾಗ| ಉಜ್ಜುಗದಿ ಸಂಜೆಯೊಳು| ನರರೆಲ್ಲ ಬರುವಾಗ|| ತಳಿರೊಳಗೆ ಕೋಕಿಲೆಯು| ಕೊಳಲನು ನುಡಿವಾಗ| ಎಳೆದಾದ ರವಿಕಿರಣ| ಇಳೆಯನ್ನು ತೊಳೆವಾಗ|| ಕವಿ: ಕುವೆಂಪು Relevant links http://nandondmatu.blogspot.com/2011/07/11.html
ಆನಂದದಿಂ ಜನಿಸಿ, ಆನಂದದೊಳು ಬೆಳೆದು ಆನಂದವನೆ ಸೇರುವೆವು ಕಡೆಯೊಳೆಲೆ ಜೀವ ನೀನೇಕೆ ಅಳುತಿಹೆ! ಮುಂಜಾನೆ ಮಂಜಿನೊಳು ಗಾನವಂ ಪಾಡುವುದು ಕಮನೀಯ ಕೋಕಿಲೆಯು, ಧರಣಿಯಂ ತೇಜದಿಂ ತುಂಬಿಬರುವನು ರವಿಯು, ಹರಿಣಾಂಕ ಬೆಳಗುವನು ತಿಮಿರಿವನು ಹಾಲುಮಯ ಕಿರಣದಿಂ, ಪುಷಗಳು ಕಾನನವ ಸಲೆ ಮುತ್ತಿ ಮೆರೆಯುವುವು ಪಡೆ ಮುದವ ಪ್ರಕೃತಿಯೊಳು, ಎಲೆ ಜೀವ! ಕಾನನದ ರೂಪಿನಿಂ ಪರ್ವತದ ರೂಪಿನಿಂ ಆನಂದ ಮೆರೆಯುತಿದೆ! ಫಲಪುಷ್ಪಬಳ್ಳಿಗಳು, ಗಾನವನು ಸಲೆ ಕೊಡುವ ಸಂಗೀತ ಕೋವಿದನು, ಕವಿವರನು ಎಲ್ಲರುಂ ರೂಪುದಳೆದಾನಂದ! ಭವನವನು ನಾಕವನು ಅತಳಪಾತಾಳವನು ಸವಿಯಾದ ವಿಶ್ವವನೆ ಆನಂದ ತುಂಬಿಹುದು! ಕವಿ: ಕುವೆಂಪು Relevant link: https://shodhganga.inflibnet.ac.in/bitstream/10603/132046/11/11_appendix.pdf https://imgur.com/a/Z8ib2ns…
ಹೇಳಿ ಮುಗಿಸುವುದರೊಳಗೆ ನೆನ್ನೆ ನಾಳೆಯಾಗುತ್ತಾ ಇದೆ. ಕವನ ಸಂಕಲನ: ಕುಂಟೋಬಿಲ್ಲೆ ಕವಿ: ರಾಮಾನುಜನ್ https://www.youtube.com/watch?v=rHO_FmCuNHA
ಬೋರೇಗೌಡನೆಂಬ ಗೌಡ ಬಂದ ಬೆಂಗಳೂರ್ಗೆ, ಬಂದ ಬೆಂಗಳೂರ್ಗೆ. ಬಳೇಪೇಟೆಮೇಲೆ ಹತ್ತಿ ಬರುತಿದ್ದಾಗ, ಗೌಡ ಬರುತಿದ್ದಾಗ, ಪೌಡರ್ ಗೀಡರ್ ಹಚ್ಚಿಕೊಂಡಾ ಮನುಷ್ಯಳೊಬ್ಬ್ಳು, ಕಣ್ಣು ಗಿಣ್ಣು ಮಿಟುಕ್ಸಿ ಗಿಟುಕ್ಸಿ ನೋಡಿ ನಕ್ಕಾಗ. ಆಗ ಬೇಡವ್ವಾ ಬಳೇಪೇಟೇ. ನಮಸ್ಕಾರ ನಗರ್ ಪೇಟೇ. ನಮ್ ತಿಪ್ಪಾರಳ್ಳಿ ಬಲು ದೂರಾ. - ಕೈಲಾಸಂ Lyrics: https://archive.org/details/unset0000unse_u2d0/page/64/mode/2up Song: https://www.youtube.com/watch?v=liFHg7VpVd0 ಬೋರನ ಕುರಿತು: https://www.youtube.com/watch?v=u5_K2Df0wgE Interpretation: https://www.youtube.com/watch?v=UZHDHY3j2To…
ಪ್ರಭೂ, ಪರಾಕುಪಂಪನ್ನೊತ್ತಿಯೊತ್ತಿ ನಡ ಬಗ್ಗಿರುವ ಬೊಗಳುಸನ್ನಿಯ ಹೊಗಳುಭಟ್ಟ ಖಂಡಿತ ಅಲ್ಲ; ಬಾಲವಾಡಿಸಿ ಹೊಸೆದು ಹೊಟ್ಟಿ ಡೊಗ್ಗುಸಲಾಮು ಬಗ್ಗಿ ಮಿಡುಕುವ ಸಂಧಿವಾತ ಪೀಡಿತನಲ್ಲ; ತನ್ನ ಮೋಂಬತ್ತಿ ನಂದಿಸಿ ಸಂದಿಬೆಳಕಲ್ಲಿ ಜುಮ್ಮನರಸುವ ಷಂಡ ಜಿಗಣೆಯಲ್ಲ; ಕಾಲಪುಷ್ಟರ ಪೃಷ್ಠಕೊಡ್ಡಿ ಬೆನ್ನ, ಕಠಾರಿ ಒರೆಗೆ ತುರುಕಿರುವ ಹೆಂಬೇಡಿಯಲ್ಲ. - ಗೋಪಾಲಕೃಷ್ಣ ಅಡಿಗ ಕವನ ಸಂಕಲನ : ಭೂಮಿಗೀತ Relevant links Lyrics: http://adiga.angala.in/prathane/ ವಾಚನ ಮತ್ತು ಅರ್ಥ: https://www.youtube.com/watch?v=SWgExLMuPY0 ಅನಂತಮೂರ್ತಿಯವರ ಪದ್ಯದ ನಂಟು: http://adiga.angala.in/galikadeyalu/ ಪದ್ಯ ಸಂಬಂಧಿತ ಕೂತುಹಲಕಾರಿ ಕತೆ: https://m.dailyhunt.in/news/india/kannada/prajavani-epaper-praj/svaabhimaana+mattu+samagra+kaavya-newsid-82043889 https://www.facebook.com/adigaangala/posts/319711551708938 Translation by A.K Ramanujan: https://ruthumana.com/2018/03/23/translation-of-gopala-krishna-adiga-poem-a-k-ramanujan/ Translation by Sumatīndra Nāḍiga: https://imgur.com/a/ZV7VeoI Reciting poem translation by A.K Ramanujan: https://www.youtube.com/watch?v=mWYJwy_SzAs…
ಹೊಸಹಾದಿಯನು ಹಿಡಿದು ನಡೆಯಣ್ಣ ಮುಂದೆ ಹೊಸ ಜೀವ ಹೊಸ ಭಾವ ಹೊಸ ವೇಗದಿಂದೆ. ಅಂಜದಿರು ಗೆಳೆಯ ಹೊಸಹಾದಿಯನು ಹಿಡಿಯೆ ಮಂಜುತರ ಸೃಷ್ಟಿಗಾನದಲಿ ಮೈಮೆರೆಯೆ ಎಂಜಲಾಗದ ಮಧುರ ಮಧುರಸವ ಸವಿಯೆ ರಂಜಿಸುವ ಕಾಡುಮೇಡುಗಳನಂಡಲೆಯೆ. - ಗೋಪಾಲಕೃಷ್ಣ ಅಡಿಗ ಕವನ ಸಂಕಲನ: ಭಾವತರಂಗ Relevant links Lyrics: https://archive.org/details/dli.osmania.3244/page/n21/mode/2up Song: https://youtu.be/2rPqyHd7U5k?t=1604 Song: https://www.youtube.com/watch?v=Uq00OFLlfCA…
ಹರಿಗೆ ಎಂದು ಗುಡಿಯನೊಂದು ಕಟ್ಟುತಿರುವೆಯಾ? ಹರಿಯ ಒಲುಮೆ ಪಡೆದು ಪುಣ್ಯ ಗಳಿಸುತಿರುವೆಯಾ? ಹುಚ್ಚ! ನೀನು ಹಳ್ಳಿಗೋಡು ದೀನ ಜನರ ಪಾಡ ನೋಡು ಇರಲು ಗುಡಿಯು ಇಲ್ಲವಲ್ಲ ಹೊಟ್ಟೆ ತುಂಬ ಅನ್ನವಿಲ್ಲ! ಹರಿಗೆ ಎಂದು ಗುಡಿಯನೊಂದು ಕಟ್ಟುತಿರುವೆಯಾ? - ದಿನಕರ ದೇಸಾಯಿ Relevant links. Lyrics: https://archive.org/details/in.ernet.dli.2015.362907/page/n109/mode/1up Interpretation: http://sallaap.blogspot.com/2012/05/blog-post.html ಸಂಗೀತ ದಿನಕರ ದೇಸಾಯಿ ರಚನೆಗೆ: https://www.youtube.com/watch?v=G6QZdvZK-DQ ಸಂಗೀತ ಪುತಿನಾ ರಚನೆಗೆ: https://www.youtube.com/watch?v=aGVqpjWVHY0 ಪುತಿನಾ ರಚನೆ ವ್ಯಾಖ್ಯಾನ: https://www.youtube.com/watch?v=Yh7d3a4z5nc…
ನಿಮ್ಮ ಪತ್ರ ಬಂದು ಸೇರಿ ಎರಡು ಮೂರು ಬಾರಿಯೋದಿ ಎಲ್ಲ ತಿಳಿದೆನು. ನೀವು ನನಗೆ ಗಂಡನಲ್ಲ ನಾನು ನಿಮಗೆ ಹೆಂಡಿರಲ್ಲ ನೀವು ತಿಳಿವುದು. ಕುಂಟು ಕಾಲು ಬಚ್ಚು ಬಾಯಿ ಮೆಳ್ಳುಗಣ್ಣು, ನಿಮ್ಮ ಸೇವೆ ಮಾಡಲಾರೆನು. - ಎಂ ಆರ್ ಶ್ರೀನಿವಾಸಮೂರ್ತಿ Relevant links: Lyrics: https://archive.org/details/in.ernet.dli.2015.362907/page/n115/mode/1up Lyrics: http://chilume.com/?p=10886…
ಕವನ ಸಂಕಲನ: ಅಗ್ನಿಹಂಸ ಬರೆದವರು: ಕುವೆಂಪು Lyrics: https://archive.org/details/dli.osmania.3379/page/n74/mode/1up
ಕವನ ಸಂಕಲನ: ಅಗ್ನಿಹಂಸ ಮೂಲ: ಶ್ರೀ ಆದಿ ಶಂಕರಾಚಾರ್ಯ Translated by: ಕುವೆಂಪು Lyrics: https://archive.org/details/dli.osmania.3379/page/n72/mode/1up English meaning: https://www.youtube.com/watch?v=_AHBSi2_Dpc Translation Isha: https://isha.sadhguru.org/us/en/blog/article/mystic-chants-nirvana-shatakam Translation by Shikaripura Harihareshwara: https://twitter.com/hamsanandi/status/889710261053018112…
ಏನಿಲ್ಲ! ಏನಿಲ್ಲವೆಂಬುದೂ ಅಲ್ಲಿಲ್ಲ! ಏನದೆಂಬುದನರಿವರಾರೊಬ್ಬರೂ ಇಲ್ಲ! ಕರಿದಿಲ್ಲ; ಬಿಳಿದಿಲ್ಲ; ದಿನವಿಲ್ಲ; ನಿಶೆಯಿಲ್ಲ ಅರಿವಿಲ್ಲ; ಮನವಿಲ್ಲ; ಅಳಿವಿಲ್ಲ; ಉಳಿವಿಲ್ಲ; ಶೂನ್ಯಮಲ್ಲವು! ಸರ್ವವೂ ‘ನೇತಿ.. ನೇತಿ’! ಕಾಲದೇಶಗಳಿಲ್ಲ! ಸಾವು ಬಾಳುಗಳಿಲ್ಲ! ನಾನಿಲ್ಲ; ನೀನಿಲ್ಲ; ಸರ್ವವೂ ಮೌನ! ತಿಮಿರ ಬೆಳಕಿನೊಳಡಗಿ, ಬೆಳಕು ತಿಮಿರದೊಳವಿತು, ಭಾವ ಶೂನ್ಯವ ಸೇರಿದುದು ಐಕ್ಯಮಾಗಿ! ರವಿಯಿಲ್ಲ; ಶಶಿಯಿಲ್ಲ; ನಭವಿಲ್ಲ; ಧರೆಯಿಲ್ಲ; ತುದಿಯಿಲ್ಲ; ಮೊದಲಿಲ್ಲ; ಒಂದಿಲ್ಲ; ಎರಡಿಲ್ಲ; ಏನು ಏನಾಗಿರ್ದುದೋ ಬಲ್ಲವರಾರು? ಭಾವದೊಳಭಾವವೋ? ಶೂನ್ಯದೊಳಶೂನ್ಯವೋ? ಅರಿವಿನಾಚೆಯ ತೀರ ಬರಿ ಮೌನ, ಮೌನ! ಜ್ಞಾನತಾನಲ್ಲಿಲ್ಲ; ಜ್ಞೇಯಮದುಮಿಲ್ಲ; ಜ್ಞಾನಜ್ಞೇಯಗಳೆಲ್ಲ ಜ್ಞಾತನೊಳು ಸೇರೆ ಏನು ಏನಾಗಿರ್ದುದೋ ಬಲ್ಲವರದಾರು? ಕವನ ಸಂಕಲನ: ಅಗ್ನಿಹಂಸ. Translated by: ಕುವೆಂಪು Lyrics: https://archive.org/details/dli.osmania.3379/page/n63/mode/1up Original poem written by Swami Vivekananda: https://en.wikisource.org/wiki/The_Complete_Works_of_Swami_Vivekananda/Volume_4/Translation:_Poems/The_Hymn_of_Creation https://www.facebook.com/2370904699886605/…
ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು. ಹೊಸ ನೆತ್ತರುಕ್ಕುಕ್ಕಿ ಆರಿ ಹೋಗುವ ಮುನ್ನ, ಹರಯದೀ ಮಾಂತ್ರಿಕನ ಮಾಟ ಮಸಳುವ ಮುನ್ನ, ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ, ಈ ಕ್ಷುಬ್ಧ ಸಾಗರವು ಬತ್ತಿಹೋಗುವ ಮುನ್ನ, ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು. ನಮ್ಮದೆಯ ಕನಸುಗಳೆ ಕಾಮಧೇನು – ಆದಾವು ಕರೆದಾವು ವಾಂಛಿತವನು. - ಗೋಪಾಲಕೃಷ್ಣ ಅಡಿಗ Relevant Links Lyrics: https://archive.org/details/dli.osmania.4791/page/n15/mode/2up English translation: https://imgur.com/a/157Ecud Chandrashekhar Kedlaya: https://www.youtube.com/watch?v=EdKj_YS1A7U Song: https://www.youtube.com/watch?v=XnI0BqnOihM ಗೀತಾ ವಸಂತ ವಿಶ್ಲೇಷಣೆ: https://www.youtube.com/watch?v=4bzarnjk4eQ…
ಕೆಲಸವಿಲ್ಲದವನು ನಾನು, ಬರಿಯ ಅಲಸನು - ಗೋಪಾಲಕೃಷ್ಣ ಅಡಿಗ Related links Lyrics: https://archive.org/details/dli.osmania.4791/page/n69/mode/2up Interpretation: https://www.youtube.com/watch?v=NBwELnr1zxs
ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು - ಗೋಪಾಲಕೃಷ್ಣ ಅಡಿಗ ಕವನ ಸಂಕಲನ: ಕಟ್ಟುವೆವು ನಾವು Related links Lyrics: https://archive.org/details/dli.osmania.4791/page/n21/mode/2up Chandrashekhara Kambara: https://www.youtube.com/watch?v=ZGmEmCd4rA0 Chandrashekar Kedilaya: https://www.youtube.com/watch?v=3gW1u70yYck Ratnamala Prakash: https://youtu.be/HC8vkVF_gME?t=893 MD Pallavi: https://www.youtube.com/watch?v=ZNVBZUNTIL0 America America: https://www.youtube.com/watch?v=iaNgco2oRUs…
ನೆಹರೂ ನಿವೃತ್ತರಾಗುವುದಿಲ್ಲ ಇನ್ನು ಪರವಾ ಇಲ್ಲ. ಗಾಳಿ ಯಥಾ ಪ್ರಕಾರ ಬೀಸಲು ಬಹುದು. - ಗೋಪಾಲಕೃಷ್ಣ ಅಡಿಗ Lyrics: https://twitter.com/acharya2/status/601429378002628608 English translation: http://komalesha.blogspot.com/2015/07/nehru-wont-retire-gopalakrishna-adiga.html U. R. Ananthamurthy reading the poem: https://www.youtube.com/watch?v=hUYuZLi9k1A H. S. Shivaprakash reading the poem. https://www.youtube.com/watch?v=d36hKQAbrBs…
ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸಾ ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ ಭೃಂಗದ ಬೆನ್ನೇರಿ ಬಂತು… - ಬೇಂದ್ರೆ Meaning: http://sallaap.blogspot.com/2012/10/blog-post.html http://sallaap.blogspot.com/2008/04/blog-post_11.html Song: https://www.youtube.com/watch?v=9G9qzNKKL1M Poetry recital: https://www.youtube.com/watch?v=d45fy7xHDDI…
ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ. ಹಸಿರು ಹಚ್ಚಿ ಚುಚ್ಚಿ ಮೇಲಕ್ಕರಿಸಿಣ ಹಚ್ಚಿ; ಹೊನ್ನ ಚಿಕ್ಕಿ ಚಿಕ್ಕಿ; ಇಟ್ಟು ಬೆಳ್ಳಿ ಅಕ್ಕಿ. - ವರಕವಿ ಡಾ. ದ.ರಾ. ಬೇಂದ್ರೆ (೧೯೩೧ ‘ಗರಿ’ ಕವನ ಸಂಕಲನ) Related readings: Lyrics: http://madhurageete.blogspot.com/2014/03/paataragitti-pakka-nodidena-akka-da-ra.html Song: https://www.youtube.com/watch?v=PIqtUkDnAEk Explanation: https://bit.ly/2CN7R0S English Translation: https://imgur.com/a/viINLS2 ಕವನದಲ್ಲಿ ಬರುವ ವಿವಿಧ ಸಸ್ಯಗಳ ಹೆಸರುಗಳು: http://sallaap.blogspot.com/2010/10/concordance_7563.html https://www.youtube.com/watch?v=_yN0Z4O5A9Q https://www.youtube.com/watch?v=BrZBqTuoyfg…
ಯಾವ ಕಾಲದ ಶಾಸ್ತ್ರವೇನು ಹೇಳಿದರೇನು? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು? ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು? ನಿನ್ನೆದೆಯ ದನಿಯೆ ಋಷಿ ! ಮನು ನಿನಗೆ ನೀನು ! ನೀರಡಿಸಿ ಬಂದ ಸೋದರಗೆ ನೀರನು ಕೊಡಲು ಮನುಧರ್ಮಶಾಸ್ತ್ರವೆನಗೊರೆಯಬೇಕೇನು ? ನೊಂದವನ ಕಂಬನಿಯನೊರಸಿ ಸಂತೈಸುವೊಡೆ ಶಾಸ್ತ್ರ ಪ್ರಮಾಣವದಕಿರಲೆ ಬೇಕೇನು ? - ಕುವೆಂಪು Relevant Links Lyrics: https://archive.org/details/in.ernet.dli.2015.362907/page/n91/mode/1up C. Aswath: https://www.youtube.com/watch?v=R_qPwRNYNjQ…
ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ, ನಿತ್ಯವೂ ಅವತರಿಪ ಸತ್ಯಾವತಾರ. ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗಿ, ಭವಭವದಿ ಭವಿಸಿ, ಓ ಭವವಿದೂರ. ಕವನ ಸಂಕಲನ: ಅಗ್ನಿಹಂಸ. ಬರೆದವರು: ಕುವೆಂಪು. Relevant links. Lyrics: https://archive.org/details/dli.osmania.3379/page/n101/mode/1up C Ashwath: https://www.youtube.com/watch?v=hgSqjgdJprg Interpretation: https://localkebal.com/haadu-jaadu-8/ Interpretation: http://agnihamsa.blogspot.com/2011/08/blog-post.html…
ಕವನ ಸಂಕಲನ: ಅಗ್ನಿಹಂಸ ಬರೆದವರು: ಕುವೆಂಪು Relevant links. Lyrics: https://archive.org/details/dli.osmania.3379/page/n83/mode/1up
ಕುರಿಗಳು ಸಾರ್ ಕುರಿಗಳು - ಕೆ.ಎಸ್. ನಿಸಾರ್ ಅಹಮದ್ ಕುರಿಗಳು ಸಾರ್ ಕುರಿಗಳು; ಸಾಗಿದ್ದೇ ಗುರಿಗಳು. ಮಂದೆಯಲಿ ಒಂದಾಗಿ, ಸ್ವಂತತೆಯೆ ಬಂದಾಗಿ ಇದರ ಬಾಲ ಅದು ಮತ್ತೆ ಅದರ ಬಾಲ ಇದು ಮೂಸಿ ದನಿ ಕುಗ್ಗಿಸಿ, ತಲೆ ತಗ್ಗಿಸಿ ಹುಡುಕಿ ಹುಲ್ಲು ಕಡ್ಡಿ ಮೇವು, ಅಂಡಲೆಯುವ ನಾವು ನೀವು - ಕುರಿಗಳು ಸಾರ್ ಕುರಿಗಳು; ನಮಗೊ ನೂರು ಗುರಿಗಳು. ಎಡ ದಿಕ್ಕಿಗೆ ಬಲ ದಿಕ್ಕಿಗೆ, ಒಮ್ಮೆ ದಿಕ್ಕು ಪಾಲಾಗಿ, ಒಮ್ಮೆ ಅದೂ ಕಳೆದುಕೊಂಡು ತಾಟಸ್ಥ್ಯದಿ ದಿಕ್ಕೆಟ್ಟು ಹೇಗೆ ಹೇಗೊ ಏಗುತಿರುವ, ಬರೀ ಕಿರುಚಿ ರೇಗುತಿರುವ, ನೊಣ ಕೂತರೆ ಬಾಗುತಿರುವ, ತಿನದಿದ್ದರು ತೇಗುತಿರುವ, ಹಿಂದೆ ಬಂದರೊದೆಯದ, ಮುಂದೆ ಬಂದರೆ ಹಾಯದ ಅವರು, ಇವರು ನಾವುಗಳು ಕುರಿಗಳು ಸಾರ್ ಕುರಿಗಳು. https://www.youtube.com/watch?v=5d7oSwvizHA Kannada: https://www.facebook.com/kannadasampada/posts/316532111766647/ English translation: https://books.google.com/books?id=S6TODwAAQBAJ&pg=175 https://theseer.in/paperplanes3-kurigalu-saar-kurigalu/ Sung by Mysore Ananthaswamy: https://youtu.be/QBvXB-7D7Mg…
Ласкаво просимо до Player FM!
Player FM сканує Інтернет для отримання високоякісних подкастів, щоб ви могли насолоджуватися ними зараз. Це найкращий додаток для подкастів, який працює на Android, iPhone і веб-сторінці. Реєстрація для синхронізації підписок між пристроями.